![]() |
| ಬನಶಂಕರಿ ದೇವಸ್ಥಾನ |
ಬನಶಂಕರಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 2 ಲಕ್ಷದ ಡಿಡಿ ಹಸ್ತಾಂತರ
ಪಟ್ಟಣದ ಬನಶಂಕರಿ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾತಿಯಾದ 02 ಲಕ್ಷ ಮೊತ್ತದ ಡಿಡಿಯನ್ನು ದೇವಸ್ಥಾನ ಸಮಿತಿಯವರಿಗೆ ಹಸ್ತಾಂತರಿಸಿ ಮಾತನಾಡಿದ ಯೋಜನಾಧಿಕಾರಿ ಶಿವಾನಂದ ಅವರು ಪೂಜ್ಯ ಡಾ// ವೀರೇಂದ್ರ ಹೆಗ್ಗಡೆಯವರು ಗ್ರಾಮೀಣ ಸರ್ವಾoಗೀಣ ಅಭಿವೃದ್ಧಿ ಕಾರ್ಯಕ್ರಮಗಳ ಜೊತೆಗೆ ಧರ್ಮೋತ್ತಾನ ಟ್ರಸ್ಟ್ ಮೂಲಕ ಸಮುದಾಯದ ಅಭಿವೃದ್ಧಿಯಡಿಯಲ್ಲಿ ದೇವಸ್ಥಾನ ಜೀರ್ಣೋದ್ದಾರಕ್ಕೆ ಪ್ರಸಾದ ರೂಪದಲ್ಲಿ ಅನುದಾನ ನೀಡುತ್ತಿದ್ದು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಡಾ. ವೀರೇಶ ಪಾಟೀಲ್ ಶ್ರೀಶೈಲ್ ದೊಡಮನಿ ಸಮಿತಿ ಅಧ್ಯಕ್ಷರಾದ ಚನ್ನಬಸಪ್ಪ ಗುಡ್ಡದ ಉಪಾಧ್ಯಕ್ಷರಾದ ಸಂಜೀವ ಗುಡ್ಡದ ಕಾರ್ಯದರ್ಶಿ ಅಖಿಲೇಶ್ ಗುಡ್ಡದ ಸಮಿತಿ ಸದಸ್ಯರು ಸೇರಿದಂತೆ ವಲಯದ ಮೇಲ್ವಿಚಾರಕರಾದ ಲಾಯಪ್ಪ ನಂದ್ಯಾಳ ಸೇವಾಪ್ರತಿನಿಧಿಗಳಾದ ಲಲಿತಾ, ಸಾವಿತ್ರಿ, ಸಕ್ಕುಭಾಯಿ, ಸರಿತಾ ಒಕ್ಕೂಟ ಪದಾಧಿಕಾರಿಗಳು ಭಾಗವಸಿದ್ದರು





No comments: