Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled » ಮುದ್ದೇಬಿಹಾಳ ಹುಡ್ಕೋ ಬಡಾವಣೆ: ತರಕಾರಿ ಮಾರುಕಟ್ಟೆ ಆರಂಭ


 ಮುದ್ದೇಬಿಹಾಳ ಹುಡ್ಕೋ  ಬಡಾವಣೆ: ತರಕಾರಿ ಮಾರುಕಟ್ಟೆ ಆರಂಭ

ಮುದ್ದೇಬಿಹಾಳ:  ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಶ್ರೀ ಗವಿ ಸಿದ್ದೇಶ್ವರ ವೇದಿಕೆ ಮೈದಾನದಲ್ಲಿ ಭಾನುವಾರ ಹೊಸದಾಗಿ ತರಕಾರಿ ಮಾರುಕಟ್ಟೆ ವ್ಯಾಪಾರ ಶುರು ಮಾಡಿದ್ದು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.  ಪುರಸಭೆಯ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಮಾತನಾಡಿ, ಪ್ರತೀ ಭಾನುವಾರ ಮಾತ್ರ ತರಕಾರಿ ಮಾರುಕಟ್ಟೆಯನ್ನು ಹುಡ್ಕೋ ಬಡಾವಣೆಯಲ್ಲಿ ನಡೆಸಲಾಗುವುದು. ಇದೇ ವೇಳೆಯಲ್ಲಿ ಪುರಸಭೆಯ ವತಿಯಿಂದ ಬಿ.ಇ.ಓ ಆಫೀಸಿನ ಮುಂದೆ ನಡೆಯುವ ತರಕಾರಿ ಮಾರುಕಟ್ಟೆ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಕೆಲಸ ಮಾಡಲಾಗುವುದು. ಇದರಿಂದ ವ್ಯಾಪಾರಿಗಳಿಗೆ ಮತ್ತು ಗ್ರಾಹಕರಿಗೆ ಸಹ ಅನುಕೂಲ ಆಗುತ್ತದೆ ಎಂದರು. ಮುಂಜಾನೆ ೬ ಗಂಟೆಯಿಂದ ಶುರುವಾದ ತರಕಾರಿ ವ್ಯಾಪಾರ ಮಧ್ಯಾಹ್ನ ೧೨ ರ ತನಕ ಭರ್ಜರಿಯಾಗಿ ನಡೆಯಿತು. ಅಲ್ಲಿ ಇಟ್ರಿ ಬಾಳ ಆಕ್ಕಿತ್ತು..ಇಲ್ಲಿ ವಿಶಾಲವಾದ ಸ್ಥಳಾವಕಾಶ ಇದ್ದು ವ್ಯಾಪಾರ ಚೊಲೊ ಆಯ್ತು. ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕ್ರಿ ಅಂತ ಅರೇಶಂಕರ ದಿಂದ ಬಂದಿದ್ದ ನೀಲಮ್ಮ ಅಯ್ಯಪ್ಪ ಮೇಟಿ ಸಂತಸದಿಂದ ತನ್ನ ಅಭಿಪ್ರಾಯ ಹೇಳಿದಳು. ವಾರದಾಗ ಒಂದು ದಿನ ಇಲ್ಲೇ ಮಾಡಬೇಕ್ರಿ, ೨-೩ ವಾರ ಹೋದ ಮೇಲೆ ಗಿರಾಕಿಗಳು ಇಲ್ಲಿಗೇ ಬರ್ತಾರ, ಬಾಳ ಜನಕ್ಕ ಇಲ್ಲಿ ವ್ಯಾಪಾರ ಆಗತದ  ಅಂತ ಗೊತ್ತಿಲ್ಲರಿ...ನಾವಿಲ್ಲಿ ವ್ಯಾಪಾರ ಮಾಡುದರಾಗ ಅಲ್ಲಿ ಜಾಗಾನೂ ಬಾಳ ಸ್ವಚ್ಛ ಮಾಡ್ಯಾರ್ರಿ ಅಂತ ಬಸರಕೋಡದ ಪ್ರಭು ಸೂಳಿಭಾವಿ ತನ್ನ ಅನಿಸಿಕೆ ಹೇಳಿದ...ಹೊಸ ಏರಿಯಾ ನೋಡ್ರಿ ಜನಾ ೨-೩ ವಾರ ಕಳದರ ಕೂಡತಾರ್ರಿ, ಇವತ್ತ ವ್ಯಾಪಾರ ಕಡಿಮೆ ಆಗೈತ್ರಿ ಅಂತ ಚಂದಾಸಾಹೇಬ ನದಾಫ ಹೇಳಿದ.

ನಮ್ಮ ಹುಡ್ಕೋದೊಳಗ ತರಕಾರಿ ವ್ಯಾಪಾರ ಮಾಡಬೇಕಂತ ಬಾಳ ದಿವಸದಿಂದ ನಮ್ಮ ಪ್ರಯತ್ನ ನಡೆಸಿದ್ದೆವು. ಈ ಸಂಬಂಧ ಪುರಸಭೆ ಮುಖ್ಯಾಧಿಕಾರಿಗಳಿಗೆ ಸಹ ಸಾಕಷ್ಟು ಸಲ ಮನವಿ ಮಾಡಿದ್ದೆವು. ಇಲ್ಲಿ ವ್ಯಾಪಾರ ಶುರುವಾಗಿದ್ದು ನಮಗೆ ಖುಷಿ ತಂದಿದೆ ಎಂದು ಪುರಸಭೆಯ ಮಾಜಿ ಸದಸ್ಯೆ ಸಂಗಮ್ಮ ಹಣಮಂತರಾಯ ದೇವರಳ್ಳಿ ಸಂತಸ ಹಂಚಿಕೊಂಡರು.

 ವಾರದಲ್ಲಿ ಒಂದು ದಿವಸ ಭಾನುವಾರ ಮಾತ್ರ ಇಲ್ಲಿ ವ್ಯಾಪಾರ ನಡೆಸಲಾಗುವುದು. ಉಳಿದ ದಿನ ಮಾರುತಿ ನಗರದ ತರಕಾರಿ ಮಾರುಕಟ್ಟೆ ನಡೆಸಲು ಅನುಕೂಲ ಮಾಡಿಕೊಡಲಾಗುವುದು. ಹುಡ್ಕೋ ಬಡಾವಣೆ, ನಾಯನೇಗಲಿ ಬಡಾವಣೆ, ಹೆವೆನ್ ಸಿಟಿ ಬಡಾವಣೆಯ ಜನರಿಗೆ ಕೆಳಗಿನ ಮಾರುಕಟ್ಟೆ ದೂರ ಆಗುತ್ತಿದ್ದವು. ಇಲ್ಲಿ ವಾರಕ್ಕೊಮ್ಮೆ ವ್ಯಾಪಾರ ಶುರುವಾಗಿದ್ದು ನಮಗೆಲ್ಲ ಸಂತಸವಾಗಿದೆ ಎಂದು ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಮರೇಶ ಗೂಳಿ ಹೇಳಿದರು.

ಮಾರುತಿ ನಗರದಲ್ಲಿ ನಡೆಯುತ್ತಿದ್ದ ತರಕಾರಿ ಸಂತೆಯಿಂದ ಎಲ್ಲಾ ಗಾಡಿ ರಸ್ತೆಗೇ ನಿಲ್ಲುತ್ತಿದ್ದರಿಂದ

ಟ್ರಾಫಿಕ್ ಸಮಸ್ಯೆ ಬಹಳ ಆಗುತ್ತಿತ್ತು. ಇಲ್ಲಿ ಬೇಕಾದಷ್ಟು ಜಾಗವಿದೆ. ಧೂಳು ಇಲ್ಲದ, ಸ್ವಚ್ಛವಾದ ಸ್ಥಳದಲ್ಲಿ ವ್ಯಾಪಾರ ನಡೆಯುತ್ತಿರುವುದು ನಮಗೆ ಸಂತಸ ತಂದಿದೆ. ಪ್ರತೀ ವಾರಕ್ಕೊಮ್ಮೆ ಹುಡ್ಕೋ ಬಡಾವಣೆಯಲ್ಲಿ ವ್ಯಾಪಾರ ನಡೆಯುವಂತೆ ಸಹಕಾರ ನೀಡಲಾಗುವುದು.

ಆರ್.ಎಸ್.ಬಂಗಿ ಕ್ರೈ ಬ್ರಾಂಚ್ ಪಿಎಸ್ಐ. ಮುದ್ದೇಬಿಹಾಳ

«
Next
Newer Post
»
Previous
Older Post

No comments:

Leave a Reply