ಅಲಾಯಿ ದೇವರು, ಡೋಲಿ ದೇವರ ಭವ್ಯ ಮೆರವಣಿಗೆ | ಹಿಂದು-ಮುಸ್ಲಿಂ ಬಾಂಧವರಿಂದ ಶ್ರದ್ಧಾಭಕ್ತಿಯ ಆಚರಣೆ.
ಮುದ್ದೇಬಿಹಾಳ ತಾಲ್ಲೂಕಿನ
ಚವನಭಾವಿ ಗ್ರಾಮದಲ್ಲಿ ಮೊಹರಂ ಹಬ್ಬದ ಅಂಗವಾಗಿ ಅಲಾಯಿ ದೇವರು ಹಾಗೂ ಡೋಲಿ ದೇವರ ಭವ್ಯ ಮೆರವಣಿಗೆಯಲ್ಲಿ ಭಕ್ತರು ಶ್ರದ್ಧಾಭಕ್ತಿಯಿಂದ ಭಾಗವಹಿಸಿದ ದೃಶ್ಯ.
ಅಲಾಯಿ ದೇವರು, ಡೋಲಿ ದೇವರ ಭವ್ಯ ಮೆರವಣಿಗೆ | ಹಿಂದು-ಮುಸ್ಲಿಂ ಬಾಂಧವರಿಂದ ಶ್ರದ್ಧಾಭಕ್ತಿಯ ಆಚರಣೆ.
ಮುದ್ದೇಬಿಹಾಳ:
ತಾಲ್ಲೂಕಿನ ಚವನಭಾವಿ ಗ್ರಾಮದಲ್ಲಿ ಹಿಂದು-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿರುವ ಮೊಹರಂ ಹಬ್ಬವನ್ನು ಶನಿವಾರ ಶ್ರದ್ಧಾ-ಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರು ಹಾಗೂ ಡೋಲಿ ದೇವರ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿದ್ದು, ಕೊನೆಗೆ ಸಂಪ್ರದಾಯಬದ್ಧವಾಗಿ ವಿಸರ್ಜನಾ( ಸಮಾಪ್ತಿ) ವಿಧಿವಿಧಾನಗಳು ನೆರವೇರಿದವು.
ಹಲಗಿ ನಾದ, ಜಯಘೋಷ ಹಾಗೂ ಧಾರ್ಮಿಕ ಸಂಭ್ರಮದ ನಡುವೆ ಅಲಾಯಿ ಮತ್ತು ಡೋಲಿ ದೇವರ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಮೆರವಣಿಗೆಯಲ್ಲಿ ಹಿಂದು-ಮುಸ್ಲಿಂ ಬಾಂಧವರು ಭುಜಕ್ಕೆ ಭುಜ ಸೇರಿಸಿ ಹೆಜ್ಜೆ ಹಾಕಿ ಕುಣಿದು ಭಾವೈಕ್ಯತೆಯ ಸಂದೇಶ ಸಾರಿದರು. ಮಹಿಳೆಯರು, ಯುವಕರು, ಮಕ್ಕಳು ಹಾಗೂ ಹಿರಿಯರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು. ಅಲಾಯಿ ದೇವರ ಮುಂದೆ ಭಕ್ತರು ಉತ್ತತ್ತಿ ಹಾಗೂ ಚುರಮುರಿ ತುರುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಮೆರವಣಿಗೆಯು ಗ್ರಾಮದ ಮಸೂತಿಯಿಂದ ಪ್ರಾರಂಭವಾಗಿ
ಶ್ರೀ ಯಮನೂಪ್ಪ ಗುಡಿಯಿಂದ ಆರಂಭವಾಗಿ ಶ್ರೀ ಗದ್ದೆಮ್ಮ ದೇವಿ ದೇವಸ್ಥಾನ ಹಾಗೂ ಶ್ರೀ ಆಂಜನೇಯ ದೇವಸ್ಥಾನಕ್ಕೆ ತೆರಳಿ, ದೇವರ ಅಪ್ಪಸಾಬ ದೇವರ ಆಶೀರ್ವಾದ ಪಡೆದು ಸಮಾಗಮಗೊಂಡಿತು.
ನಂತರ ಗ್ರಾಮದ ಅಪ್ಪಸಾಬ ದೇವರ ಆರ್ಶಿವಾದಗಳನ್ನು ಮುಗಿಸಿ ಊರಿನ ದೈವದ ಬಾವಿಯಲ್ಲಿ ಗಂಗಸ್ಥಳ ಮುಗಿಸಿ ಅಲಾಯಿ ಹಾಗೂ ಡೋಲಿ ದೇವರ ವಿಸರ್ಜನಾ( ಸಮಾಪ್ತಿ) ಕಾರ್ಯ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಅಲಾಯಿ ದೇವರನ್ನು ಹಿಡಿಯುವವರಾಗಿ ಕಾಶಪ್ಪ ಈಳಗೇರ, ಲಕ್ಷ್ಮಣ ಈಳಗೇರ ಹಾಗೂ ಮುದಕಪ್ಪ ಈಳಗೇರ ಸೇವೆ ಸಲ್ಲಿಸಿದರು. ಪೂಜಾರಿಗಳಾದ ದೌಲಸಾಬ ಮುಜವಾರ ಹಾಗೂ ಹಲಳ್ಳಿ ಬುಕ್ ಯಮನೂರಿ ನಾಯ್ಕೋಡಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಮೆರವಣಿಗೆಯಲ್ಲಿ ಚವನಭಾವಿ ಗ್ರಾಮದ ಸಮಸ್ತ ದೈವ ಮಂಡಳಿ, ಹಿಂದು-ಮುಸ್ಲಿಂ ಬಾಂಧವರು, ಮಹಿಳೆಯರು, ಯುವಕರು, ಮಕ್ಕಳು, ನಾಗರಿಕರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಮೊಹರಂ ಹಬ್ಬವನ್ನು ಭಕ್ತಿ, ಶಾಂತಿ ಮತ್ತು ಸೌಹಾರ್ದತೆಯಿಂದ ಆಚರಿಸಿದರು.





No comments: