Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled » ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದೇಬಿಹಾಳದ ನೇತಾಜಿನಗರದ ಮೊಹರಂ ಕೌಡಿ ಪೀರಾ ಮೆರವಣಿಗೆ ಯುವ ಉದ್ಯಮಿ ಶಿಕಂದರ್ ಚಾಲನೆ

  ಭಾವೈಕ್ಯತೆಗೆ ಸಾಕ್ಷಿಯಾದ ಮುದ್ದೇಬಿಹಾಳದ ನೇತಾಜಿನಗರದ ಮೊಹರಂ ಕೌಡಿ ಪೀರಾ  ಮೆರವಣಿಗೆ ಯುವ ಉದ್ಯಮಿ ಶಿಕಂದರ್ ಚಾಲನೆ 



ಮುದ್ದೇಬಿಹಾಳ ;ಭಾವೈಕ್ಯತೆಯ ಪ್ರತೀಕವಾಗಿರುವ ಮೊಹರಂ ಕೌಡಿಪೀರಾ ಹಬ್ಬ ಭಾನುವಾರ ನೇತಾಜಿನಗರದಲ್ಲಿ ಶ್ರದ್ಧಾ-ಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಕೌಡಿಪೀರಾ ಹಾಗೂ ದೇವರ ಭವ್ಯ ಮೆರವಣಿಗೆಗೆ ಸಿಕಂದರ್ ಜಾನ್ವೇಕರ ಚಾಲನೆ ನೀಡಿದರು.


ಹಲಗಿ ನಾದ, ಡೊಳ್ಳು, ಜಯಘೋಷ ಹಾಗೂ ಧಾರ್ಮಿಕ ಸಂಭ್ರಮದ ನಡುವೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿತು. 







ಮೆರವಣಿಗೆಯಲ್ಲಿ ಹಿಂದು-ಮುಸ್ಲಿಂ ಬಾಂಧವರು ಭುಜಕ್ಕೆ ಭುಜ ಸೇರಿಸಿ ಹೆಜ್ಜೆ ಹಾಕಿ ಕುಣಿದು, ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂದೇಶ ಸಾರಿದರು. ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಎಲ್ಲ ಸಮುದಾಯದ ಜನರು ಉತ್ಸಾಹದಿಂದ ಪಾಲ್ಗೊಂಡರು.


ಈ ಸಂದರ್ಭದಲ್ಲಿ ಪೀರಸಾಬ್ ಬಾಗಲಕೋಟ, ಮೋತಿಲಾಲ್ ಕಲಾಲ, ಪರಶುರಾಮ ನಾಲತವಾಡ, ಗೋಪಾಲ ಕಲಾಲ, ಮೈಬೂಬ ಜಾನ್ವೇಕರ, ಅಪ್ಪು ಮಡಿವಾಳರ, ಶ್ರೀಕಾಂತ ಅಂಬಿಗೇರ, ಅಬ್ದುಲ್ ಬಾಗಲಕೋಟ, ಅಲ್ಲಿಸಾಬ್ ಬಾಗಲಕೋಟ, ಸುನೀಲ್ ಚಂದುಕರ, ರಫೀಕ್ ಬಾಗಲಕೋಟ, ಸಚಿನ್ ಕಲಾಲ, ಮಂಜುನಾಥ ಕಾಂಬಳೇಕರ, ಶಾಯಿದ್ ನಿಡಗುಂದಿ, ವೆಂಕಟೇಶ ಕಲಾಲ, ರೀತೇಶ್ ಕಲಾಲ, ಸಮರ್ಥ ಮಡಿವಾಳರ, ಧ್ರುವ ಕಲಾಲ, ರವಿ ಹಡಲಗೇರಿ, ಅರ್ಜುನ ಪಾತ್ರೋಟ, ಆಯಾನ್ ಬಾಗಲಕೋಟ, ಸೋಯಲ್ ಕಸಾಬ್, ನಾಸೀರ್ ನಾಗಸೂರ, ಆಶೀಪ್ ಕಲಾಲ ಸೇರಿದಂತೆ ನೇತಾಜಿನಗರ ಕೌಡಿಪೀರಾ ಮೊಹರಂ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಹಬ್ಬವನ್ನು ಶಾಂತಿಯುತವಾಗಿ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.


«
Next
Newer Post
»
Previous
Older Post

No comments:

Leave a Reply