Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled »

ಪಟ್ಟಣಕ್ಕೆ ಸರಬರಾಜಾಗುತ್ತಿರುವ ಕುಡಿಯುವ ಕೆಂಪು ಬಣ್ಣದ ನೀರಿಗೆ ಆತಂಕ ಬೇಡ; ಕಾಯಿಸಿ ಕುಡಿಯಿರಿ: ಮಲ್ಲಿನಗೌಡ ಬಿರಾದಾರ --------- 




ದೇವೂರ ಜಾಕ್‌ವೆಲ್ ನೀರಿನ ಬಣ್ಣ ಬದಲಾವಣೆ ಸಹಜ; ಗಾಬರಿಯಾಗದಂತೆ ಪುರಸಭೆ ಮನವಿ ------- ಮುದ್ದೇಬಿಹಾಳ:ತಾಲೂಕಿನ ದೇವೂರ ಗ್ರಾಮದ ಹತ್ತಿರ ಇರುವ ಜಾಕ್‌ವೆಲ್‌ನಿಂದ ಮುದ್ದೇಬಿಹಾಳ ಪಟ್ಟಣಕ್ಕೆ ಸರಬರಾಜಾಗುತ್ತಿರುವ ಕುಡಿಯುವ ನೀರಿನಲ್ಲಿ ಭಾರಿ ಮಳೆಯ ಪರಿಣಾಮ ಆಲಮಟ್ಟಿ ಜಲಾಶಯದಿಂದ ನೀರು ಹರಿಯುವದಿಂದ ಮಣ್ಣು ಮಿಶ್ರಿತ ಕೆಂಪು ಬಣ್ಣದ ನೀರು ಹರಿದು ಬರುತ್ತಿದೆ.



 ಇದರಿಂದ ನೀರಿನ ಬಣ್ಣದಲ್ಲಿ ತಾತ್ಕಾಲಿಕ ಬದಲಾವಣೆ ಕಂಡುಬಂದಿದ್ದು, ಸಾರ್ವಜನಿಕರು ಆತಂಕಪಡಬೇಕಿಲ್ಲ ಎಂದು ಪುರಸಭೆ ಸದಸ್ಯ ಮಲ್ಲಿನಗೌಡ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಳೆ ನೀರಿನೊಂದಿಗೆ ಮಣ್ಣು ಹಾಗೂ ಕೆಸರು ಮಿಶ್ರಣಗೊಂಡಿರುವುದರಿಂದ ನೀರು ಕೆಂಪು ಬಣ್ಣದಲ್ಲಿ ಕಾಣಿಸುತ್ತಿದೆ. ಆರೋಗ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ಕುಡಿಯುವ ನೀರನ್ನು ಕಡ್ಡಾಯವಾಗಿ ಕಾಯಿಸಿ ಅಥವಾ ಆರ್‌ಒ ಮೂಲಕ ಶುದ್ಧೀಕರಿಸಿ ಬಳಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮಳೆ ಕಡಿಮೆಯಾದ ಬಳಿಕ ನೀರಿನ ಬಣ್ಣ ಸಹಜ ಸ್ಥಿತಿಗೆ ಮರಳಲಿದ್ದು, ವದಂತಿಗಳಿಗೆ ಕಿವಿಗೊಡದೆ ಸುರಕ್ಷಿತ ಕುಡಿಯುವ ನೀರನ್ನು ಬಳಸುವಂತೆ ಮಲ್ಲಿನಗೌಡ ಬಿರಾದಾರ ತಿಳಿಸಿದ್ದಾರೆ.

«
Next
Newer Post
»
Previous
Older Post

No comments:

Leave a Reply