Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled »


ನೂತನ ಬಿಇಒ ಎಂ.ಎಸ್. ಬಡದಾನಿಗೆ ಅನುದಾನಿತ ಶಾಲಾ ಶಿಕ್ಷಕರಿಂದ ಸನ್ಮಾನ
ಮುದ್ದೇಬಿಹಾಳ: ತಾಲ್ಲೂಕಿನ ಅನುದಾನಿತ ಪ್ರಾಥಮಿಕ ಶಾಲೆಗಳ ಶಿಕ್ಷಕರ ಬಳಗದ ವತಿಯಿಂದ ನೂತನವಾಗಿ ಅಧಿಕಾರ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಎಂ.ಎಸ್. ಬಡದಾನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯ ಉಪಾಧ್ಯಕ್ಷ ಗೋಪಾಲ ಹೂಗಾರ ಮಾತನಾಡಿ, ತಾಲ್ಲೂಕಿನ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗೆ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂತ ಕನಕದಾಸ ಶಾಲೆಯ ಮುಖ್ಯಶಿಕ್ಷಕ ಎಂ.ಎನ್. ಯರಝರಿ, ಆರ್.ಎಸ್. ವಾಲೀಕಾರ, ಆರ್.ವೈ. ಪಾಟೀಲ, ಎಂ.ಸಿ. ಕಬಾಡೆ, ಶಂಕರ ಭಾರತಿ ಶಾಲೆಯ ಎಂ.ಎಂ. ಮಸ್ಕಿ, ಜ್ಞಾನಗಂಗೋತ್ರಿ ಶಾಲೆಯ ಎಂ.ಬಿ. ನಧಾಪ, ತಂಗಡಗಿಯ ಚರಲಿಂಗೇಶ್ವರ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಎಲ್. ಮಾದರ, ಸಂಜೀವ ಚಲವಾದಿ ಹಾಗೂ ಸಿಆರ್‌ಪಿ ಗುಂಡು ಚವ್ಹಾಣ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.

«
Next
Newer Post
»
Previous
Older Post

No comments:

Leave a Reply