- ಮುದ್ದೇಬಿಹಾಳದಲ್ಲಿ ವೇದ ಸಂಸ್ಕೃತಿ ಸಂಭ್ರಮ – ವಾರ್ಷಿಕೋತ್ಸವ ಹಾಗೂ ಜಯಂತೋತ್ಸವ ಆಚರಣೆ
![]() |
| ಸುದ್ಧಿಗಾಗಿ ಸಿದ್ದು ನ್ಯೂಸ್ ಸಂಪಾದಕರು ಸಿದ್ದು ಚಲವಾದಿ ಉಪ ಸಂಪಾದಕರು ಮುನೀರ್ ಅವಟಿಗೇರ್ |
ದಿನಾಂಕ 24-6-2026 ಬುಧವಾರ ಶ್ರೀ ವೇದ ಸಂಸ್ಕೃತ ಸೇವಾ ಸಂಘದ ವತಿಯಿಂದ ನಡೆದ ಶ್ರೀ ವೇದ ಸಂಸ್ಕೃತ ಸೇವಾ ಸಂಘದ ವಾರ್ಷಿಕೋತ್ಸವ ಹಾಗೂ ಶ್ರೀ ಯೋಗೀಶ್ವರ ಯಾಜ್ಞವಲ್ಕ್ಯ ಜಯಂತೋತ್ಸವದಲ್ಲಿ ನಮ್ಮ ಕರೆಗೆ ಒಗೊಟ್ಟು ಅಗಮಿಸಿದ ಶ್ರೀ ಸತೀಶಚಂದ್ರ ಕುಲಕರ್ಣಿ ವಕೀಲರು ಕರ್ನಾಟಕ ರಾಜ್ಯ ಬ್ರಾಹ್ಮಣ ಮಹಾಸಭಾದ ಉಪಾಧ್ಯಕ್ಷರು ಹಾಗೂ ಶ್ರೀ ವಿನಾಯಕರಾವ ಚಿ. ಕುಲಕರ್ಣಿ ಅಧ್ಯಕ್ಷರು ತಾಲೂಕಾ ಬ್ರಾಹ್ಮಣ ಅಭಿವೃದ್ಧಿ ಮಹಾಸಭಾ ಸಂಘ (ರಿ.) ಮುದ್ದೇಬಿಹಾಳ ಇವರುಗಳಿಗೆ ಸನ್ಮಾನ ಸಮಾರಂಭ ಹಾಗೂ ವೇದ ವಿಪ್ರೋತ್ತಮರಿಗೂ ಗೌರವಗಳೊಂದಿಗೆ ಸನ್ಮಾನಿಸಲಾಯಿತು ಮತ್ತು ಊರಿನ ಎಲ್ಲ ವಿಪ್ರ ಸಮಾಜದ ಗಣ್ಯರಿಗೂ ಸನ್ಮಾನಿಸಲಾಯಿತು. ಮತ್ತು ಅತೀ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು. ಈ ಕಾರ್ಯಕ್ರಮಕ್ಕೆ ಅತೀ ಉತ್ಸಾಹದಿಂದ ವಿಪ್ರ ಸಮಾಜದ ಎಲ್ಲ ಹೆಣ್ಣು ಮಕ್ಕಳು ಪಾಲ್ಗೊಂಡು ಮತ್ತು ಎಲ್ಲಾ ಯುವಕ ವೃಂದದವರೆಲ್ಲರೂ ಪಾಲ್ಗೊಂಡು ಅತೀ ವಿಜೃoಭಣೆಯಿಂದ ಕಾರ್ಯಕ್ರಮವನ್ನು ಎಸ್ಸೆಸ್ವಿಗೊಳಿಸಿದ್ದಕ್ಕಾಗಿ ಶ್ರೀ ವೇದ ಸಂಸ್ಕೃತ ಸೇವಾ ಸಂಘದ ಅಧ್ಯಕ್ಷರು ಹಾಗೂ ಸದಸ್ಯರೆಲ್ಲರೂ ಸೇರಿ ಹರ್ಷ ವ್ಯಕ್ತಪಡಿಸಿದರು ಹಾಗೂ ಮುದ್ದೇಬಿಹಾಳದ ಎಲ್ಲ ವಿಪ್ರ ಸಮಾಜದವರೆಲ್ಲರೂ ಇದರಲ್ಲಿ ಆಸಕ್ತಿಯಿಂದ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರಗು
![]() |
| ಇಂದೇ ಭೇಟಿ ನೀಡಿ |
ತಂದುಕೊಟ್ಟದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸುತ್ತಾ ಮುಂದಿನ ಎಲ್ಲ ಕಾರ್ಯಕ್ರಮಕ್ಕೆ ಒತ್ತು ಕೊಟ್ಟು ಸದಭಿರುಚಿ ತೋರಿಸುತ್ತಾರೆಂಬ ಭರವಸೆಯನ್ನು ತೋರಿಸಿಕೊಟ್ಟಿರುತ್ತಾರೆ ಅದಕ್ಕಾಗಿ ವಿಪ್ರ ಸಮಾಜ ಬಾಂಧವರೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶ್ರೀ ಮಾರುತೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಕೃಷ್ಣಜಿ ಹುನಗುಂದ ಇವರು ನೀಡಿದ ಸಹಕಾರದಿಂದ ನಾವು ಇಷ್ಟೆಲ್ಲ ಕಾರ್ಯಕ್ರಮ ಯಶಸ್ವಿಗೊಳಿಸಲು ಸಾಧ್ಯವಾಯಿತು ಅವರಿಗೂ ಸಹ ತುಂಬು ಹೃದಯದ ಅಭಿನಂದನೆಗಳು ಹಾಗೂ ಇನ್ನೂ ಅನೇಕ ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸಿದ್ದಕ್ಕಾಗಿ ಧನ್ಯವಾದಗಳು.
ಅಧ್ಯಕ್ಷರು,
ಶ್ರೀ ವೇದ ಸಂಸ್ಕೃತ ಸೇವಾ ಸಂಘ (ರಿ.) ಮುದ್ದೇಬಿಹಾಳ
ಸುದ್ದಿಗಳಿಗಾಗಿ ಸಂಪರ್ಕಿಸಿ
+91 78990 20421





No comments: