Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled » ಮುದ್ದೇಬಿಹಾಳ, ನಾಲತವಾಡ ಆರೋಗ್ಯ ಸಂಸ್ಥೆಗಳ ಆಡಳಿತ ಪ್ರಭಾರ ಬದಲಾವಣೆ.

 
Sudigagi siddu news 

ಮುದ್ದೇಬಿಹಾಳ, ನಾಲತವಾಡ ಆರೋಗ್ಯ ಸಂಸ್ಥೆಗಳ ಆಡಳಿತ ಪ್ರಭಾರ ಬದಲಾವಣೆ.

ಮುದ್ದೇಬಿಹಾಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಜೂನ್ 20ರಂದು ಹೊರಡಿಸಲಾದ ಆದೇಶದಂತೆ, ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯ ಆಡಳಿತ ಪ್ರಭಾರದಲ್ಲಿದ್ದ ಮಕ್ಕಳ ತಜ್ಞರಾದ ಡಾ. ಪರಶುರಾಮ ವಡ್ಡರ್ ಅವರನ್ನು ಆ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ, ಅವರ ಸ್ಥಾನಕ್ಕೆ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ರಂಗನಾಥ ವೈದ್ಯ ಅವರನ್ನು ನೇಮಕ ಮಾಡಲಾಗಿದೆ.

ಇದೇ ವೇಳೆ, ಡಾ. ರಂಗನಾಥ ವೈದ್ಯ ಅವರನ್ನು ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ಪ್ರಭಾರಕ್ಕೆ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಡಾ. ಪರಶುರಾಮ ವಡ್ಡರ್ ಅವರನ್ನು ನಿಯೋಜಿಸಲಾಗಿದೆ.

ಈ ಆಡಳಿತಾತ್ಮಕ ಪ್ರಭಾರ ವರ್ಗಾವಣೆ ಆದೇಶವು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೂಚಿಸಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನೂತನ ಹುದ್ದೆಗಳ ಪ್ರಭಾರ ವಹಿಸಿಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

«
Next
Newer Post
»
Previous
Older Post

No comments:

Leave a Reply