Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled » ಜಾನಪದ ಉಳಿಸಿ ಬೆಳೆಸುವ ಜವಾಬ್ಧಾರಿ ಎಲ್ಲರ ಮೇಲಿದೆ-ಪ್ರೊ|ಹಿರೇಮಠs


  ಜಾನಪದ ಉಳಿಸಿ ಬೆಳೆಸುವ ಜವಾಬ್ಧಾರಿ ಎಲ್ಲರ ಮೇಲಿದೆ-ಪ್ರೊ|ಹಿರೇಮಠ


ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಉದ್ಘಾಟನೆ, ಪದಪ್ರದಾನ, ಜಾನಪದ ಬುಡಕಟ್ಟು ದಿನಾಚರಣೆ
ಮುದ್ದೇಬಿಹಾಳ: ಗ್ರಾಮೀಣ ಭಾಗದ ಸೊಗಡಾಗಿರುವ, ಬಾಯಿಂದ ಬಾಯಿಗೆ ಹರಡಿ, ಸಾಹಿತ್ಯದ ರೂಪ ಪಡೆದುಕೊಂಡಿರುವ ಜಾನಪದ ಸಾಹಿತ್ಯ, ಕಲೆ ಮತ್ತು ಜಾನಪದ ಪ್ರಾಕಾರವನ್ನು ಉಳಿಸಿ ಬೆಳೆಸುವ ಜಬಾವ್ಧಾರಿ ಸರ್ಕಾರ ಮಾತ್ರವಲ್ಲದೆ ಯುವಜನತೆಯ ಮೂಲೂ ಇದೆ ಎಂದು ಹಿರಿಯ ಸಾಹಿತಿ, ವಿಶ್ರಾಂಥ ಪ್ರಾಧ್ಯಾಪಕ ಪ್ರೊ|ಬಿ.ಎಂ.ಹಿರೇಮಠ ಅಭಿಪ್ರಾಯಪಟ್ಟರು.

ಇಲ್ಲಿನ ಎಂಜಿಎಂಕೆ ಶಾಲೆಯಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಕನ್ನಡ ಜಾನಪದ ಪರಿಷತ್ತಿನ ಮುದ್ದೇಬಿಹಾಳ ತಾಲೂಕು ಘಟಕ ಉದ್ಘಾಟನೆ, ನೂತನ ಪದಾಧಿಕಾರಿಗಳ ಪದಪ್ರದಾನ, ಜಾನಪದ ಬುಡಕಟ್ಟು ದಿನಾಚರಣೆ ಸಂಯುಕ್ತ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಜಾನಪದದ ಹುಟ್ಟು, ಬೆಳವಣಿಗೆ, ಜಾನಪದ ಕಲೆಯಲ್ಲಿ ಹೆಸರುವಾಸಿಯಾದ ಮಹನೀಯರ ಕುರಿತು ಮಾತನಾಡುತ್ತಲೇ ನಾಡಿನಾದ್ಯಂತ ಜಾನಪದ ಕಲೆ, ಸಾಹಿತ್ಯ ಮತ್ತು ಜಾನಪದದ ಇತರೆ ಪ್ರಾಕಾರಗಳ ಮಹತ್ವವನ್ನು ಪ್ರಚಾರ ಮಾಡುವುದು ಮಾತ್ರವಲ್ಲದೆ ಸರ್ಕಾರದ ಮಟ್ಟದಲ್ಲಿ ಇವುಗಳಿಗೆ ಮಹತ್ವ ದೊರೆಯಬೇಕು ಎಂದು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿರುವ ಪರಿಷತ್ತಿನ ರಾಜ್ಯಾಧ್ಯಕ ಡಾ|ಜಾನಪದ ಎಸ್.ಬಾಲಾಜಿ ಅವರ ಪ್ರಯತ್ನ, ಶ್ರಮ ಶ್ಲಾಘಿಸಿದ ಅವರು, ತಾಲೂಕು ಘಟಕದ ಚುಕ್ಕಾಣಿ ಹಿಡಿದಿರುವ ವಿಶ್ರಾಂತ ಪ್ರಾಧ್ಯಾಪಕ ಪ್ರೊ|ಎಸ್.ಎಸ್.ಹೂಗಾರ ಮತ್ತು ಅವರ ತಂಡ ಈ ಭಾಗದಲ್ಲಿ ಜಾನಪದ ಹೆಚ್ಚು ಪ್ರಚಾರವಾಗಲು ಮತ್ತು ಜಾನಪದ ಕಲಾವಿದರಿಗೆ ಹೆಚ್ಚಿನ ಮನ್ನಣೆ ದೊರಕಿಸಿಕೊಡಲು ಪರಿಶ್ರಮ ಹಾಕುವುದರ ಜೊತೆಗೆ ಸಮಾಜದ ಕೊಂಡಿಯಾಗಿ ಕೆಲಸ ಮಾಡುವ ವಿಶ್ವಾಸವಿದೆ ಎಂದರು.

ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ|ಜಾನಪದ ಎಸ್.ಬಾಲಾಜಿ ಅವರು ಜಾನಪದ ಕಲೆ, ಸಾಹಿತ್ಯ ಮತ್ತು ಕಲಾವಿದರನ್ನು ಉಳಿಸಿ, ಬೆಳೆಸುವುದರ ಜೊತೆಗೆ ಗ್ರಾಮೀಣ ಭಾಗದಲ್ಲಿರುವ ಕಲಾವಿದರನ್ನು ಗುರ್ತಿಸಿ ಗೌರವಿಸುವ ತಮ್ಮ ಸಂಘಟನೆಯ ಪ್ರಯತ್ನ ಮತ್ತು ಅದಕ್ಕೆ ಸಹಕಾರ ನೀಡುತ್ತಿರುವವರನ್ನು ಸ್ಮರಿಸಿ ಸರ್ಕಾರ ನೈಜವಾಗಿರುವ ಈ ಕಲೆ ಮತ್ತು ಕಲಾವಿದರನ್ನು ಗುರ್ತಿಸಿ ಗೌರವಿಸಿದರೆ ಇನ್ನೂ ಹೆಚ್ಚು ಪ್ರೋತ್ಸಾಹ ನೀಡಿದಂತಾಗುತ್ತದೆ. ಸರ್ಕಾರ ಮಾಡಬೇಕಿರುವ ಕೆಲಸವನ್ನು ನಮ್ಮ ಸಂಘಟನೆ ಮತ್ತು ಅದರ ಪದಾಧಿಕಾರಿಗಳು, ಸದಸ್ಯರು ಮಾಡುತ್ತಿರುವುದು ಸಮಾಜಮುಖಿ ಸೇವೆಯ ಭಾಗವಾಗಿದೆ ಎಂದರು.
ಅತಿಥಿಗಳಾಗಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ|ಬಲವಂತ ಉಣ್ಣಿಭಾವಿ (ಪೊಲೀಸಪಾಟೀಲ), ಪದಪ್ರದಾನ ನಡೆಸಿಕೊಟ್ಟ ಪರಿಷತ್ತಿನ ಜಿಲ್ಲಾ ಸಂಚಾಲಕ ಪುಂಡಲೀಕ ಮುರಾಳ, ತಾಲೂಕು ಘಟಕದ ನೂತನ ಅಧ್ಯಕ್ಷ ಪ್ರೊ|ಎಸ್.ಎಸ್.ಹೂಗಾರ ಅವರು ಸಂಘಟನೆ ಮತ್ತು ಜಾನಪದ ಕಲೆ, ಕಲಾವಿದರ ಕುರಿತು ಮಾತನಾಡಿದರು. ಪರಿಷತ್ತಿನ ಬಾಗಲಕೋಟ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಂ.ಸಾಹುಕಾರ, ಪುರಸಭೆ ಮಾಜಿ ಸದಸ್ಯರಾದ ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಶರಣ ಸಾಹಿತ್ಯ ಪರಿಷತ್ತಿನ ಕದಳಿ ವೇದಿಕೆ ಅಧ್ಯಕ್ಷೆ ಕಾಶೀಬಾಯಿ ರಾಂಪೂರ, ನಾಲತವಾಡದ ಗುರು ದೇಶಮುಖ ಇನ್ನಿತರರು ವೇದಿಕೆಯಲ್ಲಿದ್ದರು.

ಇದೇ ವೇಳೆ ಡಾ| ಬಾಲಾಜಿ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರನ್ನು ಹಾಗೂ ಜಾನಪದ ಕಲಾವಿದರಾದ ಸಂಗಮೇಶ ಶಿವಣಗಿ, ಕಾರಕೂರನ ಭಜನಾ ಕಲಾವಿದ ಶ್ರೀಕಾಂತ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಸಂಗಮೇಶ ಶಿವಣಗಿ ತಂಡದವರು ಪ್ರಾರ್ಥಿಸಿದರು. ಪರಿಷತ್ತಿನ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ, ಎಂಜಿಎಂಕೆ ಕಾಲೇಜಿನ ಪ್ರಾಂಶುಪಾಲ ಡಾ|ಎಸ್.ಕೆ.ಹರನಾಳ ಸ್ವಾಗತಿಸಿದರು. ಡಿ.ಎಂ.ಸಾಹುಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ತಿನ ಜಂಟಿ ಕಾರ್ಯದರ್ಶಿ, ಸಿಆರ್ಪಿ ಜಿ.ಎಚ್.ಚವ್ಹಾಣ(ಗುಂಡು) ನಿರೂಪಿಸಿದರು. ಪರಿಷತ್ತಿನ ಸಹ ಸಂಚಾಲಕ ರಾಜನಾರಾಯಣ ನಲವಡೆ ವಂದಿಸಿದರು.

*ಪದಗ್ರಹಣ:
ಪರಿಷತ್ತಿನ ಮುದ್ದೇಬಿಹಾಳ ತಾಲೂಕು ಘಟಕಕ್ಕೆ ನೂತನವಾಗಿ ಆಯ್ಕೆಗೊಂಡಿರುವ ಪ್ರೊ|ಎಸ್.ಎಸ್.ಹೂಗಾರ(ಅಧ್ಯಕ್ಷ), ಪ್ರಾಂಶುಪಾಲ ಡಾ|ಎಸ್.ಕೆ.ಹರನಾಳ(ಪ್ರಧಾನ ಕಾರ್ಯದರ್ಶಿ), ಸಿಆರ್ಪಿ ಗುಂಡು ಚವ್ಹಾಣ(ಜಂಟಿ ಕಾರ್ಯದರ್ಶಿ), ನ್ಯಾಯವಾದಿ ಎನ್.ಆರ್.ಮೊಕಾಶಿ(ಸಂಘಟನಾ ಕಾರ್ಯದರ್ಶಿ), ರವಿ ನಂದೆಪ್ಪನವರ್(ಪತ್ರಿಕಾ ಕಾರ್ಯದರ್ಶಿ), ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ|ಎಂ.ಎಂ.ಬೆಳಗಲ್ಲ(ಸಂಚಾಲಕ), ರಾಜನಾರಾಯಣ ನಲವಡೆ(ಸಹಸಂಚಾಲಕ), ಗುರು ದೇಶಮುಖ, ಸಂಗಮೇಶ ಹಾರಿವಾಳ, ಶಾಂತಪ್ಪ ಕಂಬಳಿ, ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ(ಸದಸ್ಯರ) ಇದೇ ವೇಳೆ ಪದಗ್ರಹಣ ನಡೆಸಿ ತಾಲೂಕು ಘಟಕದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದರು.

«
Next
Newer Post
»
Previous
Older Post

No comments:

Leave a Reply