Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled »



ಸರ್ಕಾರ ನೇಕಾರರ ಸಾಲ ಮನ್ನಾ ಮಾಡಲಿ: ಮುದ್ದೇಬಿಹಾಳದಲ್ಲಿ ಅಧ್ಯಕ್ಷ ಶಂಕರ್ ಹೆಬ್ಬಾಳ ಒತ್ತಾಯ


​ಮುದ್ದೇಬಿಹಾಳ: ಪ್ರಸಕ್ತ ಸಾಲಿನಲ್ಲಿ ಸಂಘವು ಒಟ್ಟು 14.56 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಾಲ ಪಡೆದ ಗ್ರಾಹಕರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಸಂಸ್ಥೆಯು ಇನ್ನಷ್ಟು ಆರ್ಥಿಕವಾಗಿ ಬೆಳೆಯುತ್ತದೆ. ಪ್ರಸ್ತುತ ರೈತರು ಹಾಗೂ ನೇಕಾರರು ಸಂಕಷ್ಟದಲ್ಲಿದ್ದು, ಸರ್ಕಾರ ನೇಕಾರರ ಸಾಲ ಮನ್ನಾ ಮಾಡಬೇಕು ಎಂದು ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘ ನಿಯಮಿತದ ಅಧ್ಯಕ್ಷ ಶಂಕರ್ ಹೆಬ್ಬಾಳ ಹೇಳಿದರು.
​ಪಟ್ಟಣದ ಸಂಘದ ಕಾರ್ಯಾಲಯದಲ್ಲಿ ಮಂಗಳವಾರ ಜರುಗಿದ ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘ ನಿಯಮಿತದ 2025-26ನೇ ಸಾಲಿನ 27ನೇ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮುಂದಿನ ದಿನಗಳಲ್ಲಿ ಬ್ಯಾಂಕಿನೊಂದಿಗೆ ವ್ಯವಹರಿಸುವ ಬೇರೆ ಸಮಾಜದ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ವಿಸ್ತರಿಸಲಾಗುವುದು ಎಂದರು. ಶಿವಪ್ಪ ಹೆಬ್ಬಾಳ ಮಾತನಾಡಿ, ಪುರಸ್ಕಾರವು ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದರು. 
ಬಿಇಒ ಎಂ.ಎಸ್. ಬಡದಾನಿ ಸನ್ಮಾನ ಸ್ವೀಕರಿಸಿ,
ಮಾತನಾಡಿ ಸಹಕಾರದಿಂದ ಸಮಾಜದ ಬೆಳವಣಿಗೆ ಸಾಧ್ಯ ಎಂದರು. 
ಮುಖ್ಯ ಕಾರ್ಯನಿರ್ವಾಹಕಿ ವಿಜಯಲಕ್ಷ್ಮೀ ಪ್ಯಾಟಿಗೌಡರ ವಾರ್ಷಿಕ ವರದಿ ವಾಚಿಸಿದರು. 
ಸಂಘದ ಪಿಗ್ಮಿ ಸಂಗ್ರಾಹಕ ಗುರುಯ್ಯ ಮುದ್ನೂರಮಠ ಅವರ ನಿಧನಕ್ಕೆ ಸಂತಾಪ ಸೂಚಿಸಿ ಮೌನಾಚರಣೆ ಮಾಡಲಾಯಿತು.
​ಪ್ರತಿಭಾ ಪುರಸ್ಕಾರ ವಿವರ:
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಥಮ ₹3,000, ದ್ವಿತೀಯ ₹2,000 ಹಾಗೂ ತೃತೀಯ ₹1,500 ನಗದು ಪುರಸ್ಕಾರ ನೀಡಲಾಯಿತು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ತಲಾ ₹2,500 ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗೆ ₹1,500 ನಗದು ನೀಡಿ ಗೌರವಿಸಲಾಯಿತು.
​ಸಭೆಯಲ್ಲಿ ಉಪಾಧ್ಯಕ್ಷ ರಮೇಶ್ ಹೆಬ್ಬಾಳ, ನಿರ್ದೇಶಕರಾದ ಸುಭಾಷ್ ರುದ್ರಗಂಟಿ, ಬಸವರಾಜ ಅಗಸಬಾಳ, ಬಸಪ್ಪ ಹುಣಶ್ಯಾಳ, ಚಂದ್ರಕಾಂತ ಹೆಬ್ಬಾಳ, ದ್ಯಾವಪ್ಪ ಹುಣಶ್ಯಾಳ, ಉಮೇಶ್ ಪ್ಯಾಟಿಗೌಡರ, ಸಂಗಪ್ಪ ಕಲ್ಲುಂಡಿ, ಶಂಕ್ರಮ್ಮ ಪ್ಯಾಟಿಗೌಡರ, ಜಯಶ್ರೀ ಹೆಬ್ಬಾಳ, ನಾಲತವಾಡ ಶಾಖೆ ಸಲಹಾ ಸಮಿತಿ ಸದಸ್ಯರಾದ ಬಸವರಾಜ ಪಣಿಗೋಳ, ಸಿದ್ರಾಮ ರುದ್ರಗಂಟಿ, ಗಣೇಶಪ್ಪ ಮೇಗಿಲಮನಿ, ಸಂಗಪ್ಪ ಹಾವೇರಿ, ಗುರುರಾಜ ಕಮತಗಿ, ಅಮರೇಶ ಬಂಟನೂರ, ಬಸವರಾಜ ಪ್ಯಾಟಿಗೌಡರ, ಬಸವರಾಜ ಕಲ್ಲುಂಡಿ, ಗೋದಾವರಿ ರುದ್ರಗಂಟಿ, ನಾಲತವಾಡ ಶಾಖೆಯ ಪ್ರಭಾರ ವ್ಯವಸ್ಥಾಪಕ ಚಂದ್ರಶೇಖರ ಪ್ಯಾಟಿಗೌಡರ, ನೇಕಾರ ಸಮಾಜದ ಮುಖಂಡರು, ಬ್ಯಾಂಕ್ ಸಿಬ್ಬಂದಿ ಹಾಗೂ ಗ್ರಾಹಕರು ಉಪಸ್ಥಿತರಿದ್ದರು.

«
Next
Newer Post
»
Previous
Older Post

No comments:

Leave a Reply