ಮುದ್ದೇಬಿಹಾಳ: ಎಲ್ಲಾ ಜಾತಿಯ ಉಪಪಂಗಡ ಇವೆ. ನಾವು ಎಲ್ಲರೂ ಒಂದೆಡೆ ಸೇರಬೇಕು. ಬಸವಣ್ಣ ಎಲ್ಲರನ್ನು ಕೂಡಿಸಿಕೊಂಡು ಎಲ್ಲರೂ ಒಂದೇ ಎಂದು ಸಾರಿದರು. ವ್ಯಕ್ತಿ ಇಡೀ ಸಮಾಜದ ಏಳಿಗೆ ಮಾಡಿದ್ದ. ಎಲ್ಲಾ ಸಮಾಜದೊಂದಿಗೆ ಬೆರೆಯುವ, ಸಜ್ಜನ ಸಮಾಜದ ದಾನ ರ್ಮ ಮಾಡುವ ಗುಣ ಸಜ್ಜನ ಸಮಾಜಕ್ಕೆ ಹೆಮ್ಮೆಯಾಗಿದೆ. ದಾನ ರ್ಮ ಮಾಡಿದ್ದು ಸಜ್ಜನ ಸಮಾಜದ ಕರ್ತಿಯಾಗಿದೆ ಎಂದು ರ್ನಾಟಕ ಸಾಬೂನು ಮತ್ತು ಮರ್ಜಕ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ದಿ ರ್ನಾಟಕ ಬ್ಯಾಂಕ್ ಸಭಾಭವನದಲ್ಲಿ ಭಾನುವಾರ ಅಖಿಲ ಭಾರತ ವೀರಶೈವ ಸಜ್ಜನ ಸಮಾಜ ಸುಧಾರಣಾ ಸಂಘ ಹುಬ್ಬಳ್ಳಿ ಇದರ ಅಡಿಯಲ್ಲಿ ಮುದ್ದೇಬಿಹಾಳ ತಾಲೂಕು ವೀರಶೈವ ಸಜ್ಜನ ಗಾಣಿಗ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ೧೨೦ ಲಕ್ಷಕ್ಕೂ ಹೆಚ್ಚು ವೀರಶೈವ ಜನಸಂಖ್ಯೆ ಇದೆ. ಬೇರೆ ಕಸುಬುಗಳಲ್ಲಿ ತೊಡಗಿರುವ ಉಪಪಂಗಡ, ಒಳಪಂಗಡಗಳನ್ನು ಸಂಘಟಿಸಿ, ಒಗ್ಗೂಡಿಸಿ ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲರನ್ನೂ ಕೂಡಿಸಿಕೊಂಡು ಹೋಗಬೇಕು ಎಂದರು.
ಮೂಲ ವೃತ್ತಿ ಗಾಣದಿಂದ ಎಣ್ಣೆ ತೆಗೆಯುತ್ತಿದ್ದರು. ವಿದೇಶಿ ವಸ್ತುಗಳು ಬಂದಿದ್ದರಿಂದ ಎಣ್ಣೆ ಗಾಣ ಮಾಡುವ ಕೆಲಸ ಸ್ವಲ್ಪ ಕಡಿಮೆಯಾಯಿತು. ಅಂತರರಾಷ್ಟ್ರೀಯ ದೊಡ್ಡ ಎಣ್ಣೆ ಕರ್ಖಾನೆ ಕಂಪನಿಗಳು ಬಂದಿದ್ದರಿಂದ ಮೂಲ ಉದ್ಯೋಗ ಅವಲಂಬಿಸಿದ್ದ ಗಾಣಿಗ ಸಮಾಜದ ಎಣ್ಣೆ ತಯಾರಿಸುವ ಕೆಲಸವೂ ಕಡಿಮೆಯಾಗಿದೆ ಎಂದರು.
ಮಕ್ಕಳ ಶಿಕ್ಷಣದ ಜೊತೆಗೆ ಮಕ್ಕಳಿಗೆ ಸಂಸ್ಕಾರ ನೀಡಬೇಕು. ಒಳ್ಳೆಯ ಶಿಕ್ಷಣ ಸಂಸ್ಥೆಗಳ ಜೊತೆಗೆ ಸಜ್ಜನ ಸಮಾಜದ ಬಡ ಮಕ್ಕಳಿಗೆ ರ್ಥಿಕ ನೆರವು ನೀಡುವ ಚಳವಳಿ ನಡೆಯಬೇಕು. ವೀರಶೈವ ಸಮಾಜ ಒಂದಾಗಬೇಕಾದರೆ ನಾವು ಎಲ್ಲ ಉಪಪಂಗಡಗಳನ್ನು ಕೂಡಿಸಿಕೊಂಡು ಸಾಗಬೇಕು. ಆಗ ಮಾತ್ರ ವೀರಶೈವ ಸಮಾಜ ಒಂದು ಎಂದು ತೋರಿಸಬೇಕು. ಬಸವಣ್ಣನ ತತ್ವ ಕೃತಿಯಾಗಬೇಕು ಎಂದರು.
ಈ ವೇಳೆ ಗಾಣಿಗ ಸಮಾಜ ರಾಜ್ಯ ಅಧ್ಯಕ್ಷ ಹಾಗೂ ಗುಲರ್ಗಾ ಡಿಸಿಸಿ ಬ್ಯಾಂಕ್ ನರ್ದೇಶಕ ಸುರೇಶ ಸಜ್ಜನ ಮಾತನಾಡಿ, ದಕ್ಷಿಣ ರ್ನಾಟಕ, ಉತ್ತರ ರ್ನಾಟಕ ಭಾಗದ ರ್ಥಿಕವಾಗಿ ಹಿಂದುಳಿದ ಸಜ್ಜನ ಗಾಣಿಗ ಸಮಾಜಕ್ಕೆ ನಿಗಮದ ಸೌಲಭ್ಯಗಳನ್ನು ಒದಗಿಸಬೇಕು. ಗಾಣಿಗ ಸಮಾಜ ೨ಎ ಮೀಸಲಾತಿಯಿಂದ ಹೊರಕ್ಕೆ ಬರುವುದನ್ನು ತಪ್ಪಿಸಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಾಣಿಗ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಗಾಣಿಗ ಸಮಾಜದಲ್ಲಿ ಶ್ರೀಮಂತರು ಇದ್ದರು. ಗಾಣಿಗ ಸಮಾಜದ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಸಹಾಯ ಮಾಡಿದ್ದರೆ ಗಾಣಿಗ ಸಜ್ಜನ ಸಮಾಜ ಮುಂದೆ ಬರಲು ಕಾರಣವಾಗಿದೆ ಎಂದರು.
ಈ ವೇಳೆ ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಸಜ್ಜನ ಸಮಾಜದವರ ಪ್ರೀತಿ, ಸ್ನೇಹದಿಂದ ಸಜ್ಜನ ಸಮಾಜದಲ್ಲಿ ಪ್ರೇಮ, ಪ್ರೀತಿಯಿಂದ ಇರುತ್ತಾರೆ. ನಾವು ಸ್ವಲ್ಪ ದಾನ ಮಾಡಿ ಪ್ರಚಾರ ಮಾಡಿಕೊಳ್ಳುವ ಕೆಲವು ಜನರು ಇದ್ದಾರೆ. ಆದರೆ ಶರಣರ ಸಜ್ಜನರು ಅನೇಕ ದಾನ ರ್ಮ ಮಾಡಿದ್ದು ಇಡೀ ಸಮಾಜಕ್ಕೆ ಗೊತ್ತಿದೆ. ಗಾಣಿಗ ಸಮಾಜಕ್ಕೆ ನಿಗಮ ಸಿಗಬೇಕು ಎಂದರು.
ತಾಳಿಕೋಟಿ ಘನಮಠೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಂ.ಸಜ್ಜನ ಮಾತನಾಡಿ, ಈ ಸಮಾಜ ಹಿಂದುಳಿದಿರುವುದಕ್ಕೆ ಕಾರಣವಿದೆ. ನಾವು ಎಲ್ಲರೂ ಕೂಡಿ ಶಿಕ್ಷಣವಂತರಾಗಬೇಕು. ಸ್ವಾಭಿಮಾನ ಹಾಗೂ ಪರಿಶ್ರಮದ ಗುಣ ಶರಣರ ಸಜ್ಜನರನ್ನು ಉನ್ನತ ಹುದ್ದೆಗೆ ಹೋಗಲು ಕಾರಣವಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು. ಸಜ್ಜನ ಗಾಣಿಗ ಸಮಾಜದಿಂದ ಸ್ರ್ಧಾತ್ಮಕ ಪರೀಕ್ಷೆ ಕೇಂದ್ರ ಹಾಗೂ ತರಬೇತಿ ನೀಡಬೇಕು. ಇದರಿಂದ ಗಾಣಿಗ ಸಮಾಜದ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು.
ಈ ವೇಳೆ ಸನ್ಮಾನಿತರ ಪರವಾಗಿ ಕೆಇಬಿ ಹೆಸ್ಕಾಂ ಎಇಇ ಆರ್.ಆರ್.ಹಂಡಿ ಮಾತನಾಡಿದರು. ಶಿಕ್ಷಕ ಶರಣಪ್ಪ ಸಜ್ಜನ ಪ್ರಾಸ್ತಾವಿಕ ನುಡಿಯಲ್ಲಿ ಸಜ್ಜನ ಗಾಣಿಗ ಸಮಾಜದ ಇತಿಹಾಸ ತಿಳಿಸಿದರು.
ಈ ವೇಳೆ ದಾಲ್ ಮಿಲ್ ಉದ್ಯಮಿ ಹಾಗೂ ಹುಬ್ಬಳ್ಳಿ ರ್ನಾಟಕ ವಾಣಿಜ್ಯೋದ್ಯಮ ಸಂಘದ ನರ್ದೇಶಕ ಸಿ.ಪಿ.ಸಜ್ಜನ ಅವರನ್ನು ಸಮಾಜದಿಂದ ಹಾಗೂ ಅವರ ಅಭಿಮಾನಿಗಳಿಂದ ಸನ್ಮಾನಿಸಲಾಯಿತು.
ಸಾನಿಧ್ಯ ಗುಂಡಕನಾಳ ಬ್ರಹ್ಮಮಠದ ಪರಮಪೂಜ್ಯ ಶ್ರೀ ವಿದ್ವಾನ್ ಷ.ಬ್ರ. ಗುರಲಿಂಗ ಶಿವಾಚರ್ಯ ಮಹಾಸ್ವಾಮಿಗಳು ಆಶರ್ವಚನ ನೀಡಿದರು. ಹುಬ್ಬಳ್ಳಿ ಸಜ್ಜನ ಸಮಾಜ ಸುಧಾರಣಾ ಸಂಘದ ಅಧ್ಯಕ್ಷ ಸಂಗನಬಸಪ್ಪ ಸಜ್ಜನ (ವಿಜಯಪುರ) ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ಯಕ್ರಮದಲ್ಲಿ ಶ್ರೀಮತಿ ಅನುರಾಧಾ ಯಡವಣ್ಣವರ, ಉಪನೊಂದಣಾಧಿಕಾರಿ ಸಚಿನ್ ಖೈನೂರ, ಕಾಶಿನಾಥ ಸಜ್ಜನ, ಶಂಕ್ರಪ್ಪ ಸಜ್ಜನ, ಪ್ರಭುರಾಜ ಕಲಬರ್ಗಿ, ಬಸವರಾಜ ಇಸ್ಲಾಂಪುರ, ಪ್ರಕಾಶ ಸಜ್ಜನ, ಶಿವಶರಣ ಸಜ್ಜನ, ಬಸವರಾಜ ಸಜ್ಜನ, ತಾಲೂಕು ಸಜ್ಜನ ಗಾಣಿಗ ಸಮಾಜ ಅಧ್ಯಕ್ಷ ಶರಣು ಸಜ್ಜನ, ಉಪಾಧ್ಯಕ್ಷ ಚಂದ್ರಶೇಖರ ಸಜ್ಜನ, ಕರ್ಯರ್ಶಿ ಬಸವರಾಜ ಸಜ್ಜನ, ಪ್ರಶಾಂತ ಸಜ್ಜನ ಸೇರಿದಂತೆ ಸಜ್ಜನ ಗಾಣಿಗ ಸಮಾಜದವರು ಉಪಸ್ಥಿತರಿದ್ದರು.
ಪ್ರರ್ಥನೆ ಸಂಗಮೇಶ ಶಿವಣಗಿ, ಶಿಕ್ಷಕ ಶರಣಪ್ಪ ಸಜ್ಜನ ಸ್ವಾಗತಿಸಿದರು. ಶಿಕ್ಷಕ ಸಿದ್ದಣ್ಣ ಬಿಜ್ಜೂರ ನಿರೂಪಿಸಿದರು.





No comments: