Business

SUDDIGAGI SIDDU NEWS

Theme images by kelvinjay. Powered by Blogger.

ಜನಪ್ರಿಯ ಸುದ್ದಿಗಳು

Life & style

Games

Sports

» »Unlabelled » ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯ: ಜುಲೈ 10ರಂದು ಬಿಸಿಯೂಟ ಸ್ಥಗಿತ



 

ಅಕ್ಷರ ದಾಸೋಹ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಜುಲೈ 10 ರಂದು ರಾಜ್ಯಾದ್ಯಂತ ಬಿಸಿಯೂಟ ಬಂದ್: ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ.


​ಮುದ್ದೇಬಿಹಾಳ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಅಕ್ಷರ ದಾಸೋಹ ಯೋಜನೆಯು 25 ವರ್ಷಗಳನ್ನು ಪೂರೈಸಿದೆ. ಆದರೆ, ಈ ಯೋಜನೆಯಡಿ ದುಡಿಯುವ ನೌಕರರಿಗೆ ಸೂಕ್ತ ವೇತನ ನೀಡದೆ ಶೋಷಣೆ ಮಾಡಲಾಗುತ್ತಿದೆ. ಅಲ್ಲದೆ, ಯೋಜನೆಯನ್ನು ಖಾಸಗೀಕರಣಗೊಳಿಸುವ ಮೂಲಕ ನೌಕರರ ಬದುಕನ್ನು ಬೀದಿಪಾಲು ಮಾಡಲಾಗುತ್ತಿದೆ," ಎಂದು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ತಾಲೂಕು ಅಧ್ಯಕ್ಷ ಸುವರ್ಣ ರಾಠೋಡ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

​ಶನಿವಾರ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ. ಬೆಳಗಲ್ಲ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, 2008 ರಿಂದಲೂ ನೌಕರರ ವೇತನ ಹೆಚ್ಚಳ ಮಾಡಿಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮುನ್ನ ನೀಡಿದ ಭರವಸೆಯಂತೆ ನೌಕರರಿಗೆ ಮಾಸಿಕ ₹7,000 ವೇತನವನ್ನು ತಕ್ಷಣ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

​ ಅಖಿಲ ಭಾರತ ಮಟ್ಟದ ಕರೆಯ ಮೇರೆಗೆ ಜುಲೈ 10 ರಂದು ರಾಜ್ಯಾದ್ಯಂತ 'ಕಪ್ಪು ದಿನ' ಆಚರಿಸಲಾಗುವುದು. ಅಂದು ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಯನ್ನು ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ವಿವಿಧ ​ಪ್ರಮುಖ ಬೇಡಿಕೆಗಳಾದ

ವೇತನವನ್ನು ₹7,000ಕ್ಕೆ ಹೆಚ್ಚಿಸಬೇಕು, 6 ಗಂಟೆ ಕೆಲಸದ ಅವಧಿ ನಿಗದಿಪಡಿಸಬೇಕು, ಆರೋಗ್ಯ ವಿಮೆ ಜಾರಿ ಮತ್ತು ಮಾಸಿಕ ₹10,000 ಪಿಂಚಣಿ ನೀಡಬೇಕು. ಸಾದಿಲ್ವಾರು ಖಾತೆ ಜವಾಬ್ದಾರಿಯನ್ನು ಎಸ್‌ಡಿಎಂಸಿ (SDMC) ಗೆ ವರ್ಗಾಯಿಸುವ ಕ್ರಮವನ್ನು ರದ್ದುಗೊಳಿಸಬೇಕು. ಖಾಸಗಿ ಸಂಸ್ಥೆಗಳಿಗೆ ಬಿಸಿಯೂಟದ ಜವಾಬ್ದಾರಿ ನೀಡುವುದನ್ನು ನಿಲ್ಲಿಸಬೇಕು. ನಿವೃತ್ತ ನೌಕರರಿಗೆ ಇಡಿಗಂಟು ಪಾವತಿಸಬೇಕು, ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹25 ಲಕ್ಷ ಪರಿಹಾರ ಹಾಗೂ ಉದ್ಯೋಗ ನೀಡಬೇಕು. ನೌಕರರಿಗೆ ಶಾಲಾ ಸಿಬ್ಬಂದಿ ಎಂದು ನೇಮಕಾತಿ ಆದೇಶ ನೀಡಬೇಕು ಮತ್ತು ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮವನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

​ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಲಕ್ಷ್ಮೀ ಲಮಾಣಿ, ನೀಲಮ್ಮ ಹಿರೇಮಠ, ಬಿ.ಎಸ್. ಹಿರೇಮಠ, ವಿಜಯಲಕ್ಷ್ಮಿ ಹೂಗಾರ, ಬಿಸ್ಮಿಲ್ಲಾ ಕುಂಟೋಜಿ, ಗಿರಿಜಾ ಕೆಂಧೂಳಿ, ಎಸ್.ಎಸ್. ಕನ್ನೂರ, ಮಾಬುಬಿ ಪಟ್ಟವಾಲ್, ರೂಪಾ ನಾಯಕ್, ಸುವರ್ಣ ಮಾವಿನಭಾವಿ, ರಾಜೇಶ್ವರಿ ಬಳ್ಳಗಿ,ಶೋಭಾ ಬಿರಾದಾರ, ಸೇರಿದಂತೆ ನೂರಾರು ನೌಕರರು ಉಪಸ್ಥಿತರಿದ್ದರು.

«
Next
Newer Post
»
Previous
Older Post

No comments:

Leave a Reply